ಶನಿವಾರ, ಜುಲೈ 16, 2011

ಕುಸಿಯುತ್ತಿದೆ ಬಲದಂಡೆ ಸೇತುವೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ದಶಕಗಳ ಹಿಂದೆ ನಿರ್ಮಿಸಿದ ಹಳೆಯ ಸೇತುವೆಯನ್ನು ಕೆಡವಲು ಸಿಡಿಮದ್ದು ಬೇಕು, ಆದರೆ ಅದೇ ಜಾಗದಲ್ಲಿ ಕೇವಲ ತಿಂಗಳ ಹಿಂದೆ ಕಟ್ಟಿಸಿದ ನೂತನ ಸೇತುವೆ ಕೆಡವಲು ಒಂದು ಸಣ್ಣ ಕಬ್ಬಿಣದ ಸರಳು ಸಾಕು...
ಇದು ಗಾದೆ ಮಾತಲ್ಲ. ನಿಜ ವಿಷಯ. ಕಳಪೆ ಕಾಮಗಾರಿಯ ವಿರಾಟ್‌ರೂಪ.  ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ ಮಾಡಲಾಗಿರುವ ಸೇತುವೆ ಉದ್ಘಾಟನೆ ಭಾಗ್ಯ ಕಾಣುವ ಮೊದಲೇ ಕುಸಿಯಲಾರಂಭಿಸಿದೆ.

ಶುಕ್ರವಾರ, ಜುಲೈ 15, 2011

ಹುಣಸೂರು ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಕುಂಟುತ್ತಿದೆ ಕಾಮಗಾರಿ

ಹನಗೋಡು ನಟರಾಜ್ ಹುಣಸೂರು
ಹುಣಸೂರು ನೂತನ ಬಸ್ ನಿಲ್ದಾಣ ಆವರಣದ ಕಾಂಕ್ರಿಟ್ ನೆಲಹಾಸು ಕಾಮಗಾರಿ ಎಂಟು ತಿಂಗ ಳಿಂದಲೂ ಕುಂಟುತ್ತಾ ಸಾಗಿದೆ !
ಇದರಿಂದಾಗಿ ನಿಲ್ದಾಣದಲ್ಲಿ ಸಾಕಷ್ಟು ಅವ್ಯವಸ್ಥೆ ತಾಂಡವವಾಡುತ್ತಿದೆ. ಪ್ರಯಾಣಿಕರು, ಸಾರಿಗೆ ಸಿಬ್ಬಂದಿ ನಿತ್ಯ ಬಸವಳಿಯುತ್ತಿದ್ದರೂ ಇದರ ಪರಿವೆ ಇಲ್ಲದಂತೆ ಸಾರಿಗೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

ಮಂಗಳವಾರ, ಜುಲೈ 12, 2011

ಗುರುವಾರ, ಜುಲೈ 7, 2011

ವನ್ಯಜೀವಿಗಳ ಆರೈಕೆಗೆ ಮೀಸಲಾದ ವಿಶಿಷ್ಟ ಕುಟುಂಬ

ಎಂ.ಎಲ್.ರವಿಕುಮಾರ್ ಎಚ್.ಡಿ.ಕೋಟೆ
ಚಿನ್ನಾಟವಾಡುವ ಚಿರತೆಯನ್ನು ನೀವು ನೋಡಿರಬಹುದು. ಅದರೆ, ಮನುಷ್ಯರೊಟ್ಟಿಗೆ ಜತೆ ಜತೆಯಾಗಿಯೇ ಬದುಕುವು ದನ್ನು ಕಂಡಿದ್ದೀರಾ?..
ಎಚ್.ಡಿ.ಕೋಟೆ ಪಟ್ಟಣದಲ್ಲಿ  ವನ್ಯಜೀವಿಗಳೊಂದಿಗೆ ಒಡನಾಟ ಇಟ್ಟುಕೊಂಡ ಕುಟುಂಬವಿದೆ. ಅರಣ್ಯ ಇಲಾಖೆ ಚಾಲಕ ಬಸವನಾಯಕ ಕುಟುಂಬಕ್ಕೆ ಚಿರತೆ ಸಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ಆರೆಂಟು ತಿಂಗಳು ಸಾಕಿ ಸಲಹಿದ ನಾಲ್ಕು ಚಿರತೆ ಮರಿಗಳಲ್ಲಿ ಮೂರು ಈಗ ಮೈಸೂರು ಮೃಗಾಲಯದಲ್ಲಿವೆ. ಇನ್ನೊಂದು ಬೆಂಗಳೂರಿನ ಬನ್ನೇರಘಟ್ಟದಲ್ಲಿ ಆಶ್ರಯ ಪಡೆದಿದೆ.

ಕುಸಿಯುತ್ತಿವೆ ತಡೆಗೋಡೆಗಳು

ಹನಗೋಡು ನಟರಾಜ್ ಹುಣಸೂರು
ಮೈಸೂರು ಜಿಲ್ಲೆ  ಹುಣಸೂರು, ಎಚ್.ಡಿ.ಕೋಟೆ ತಾಲೂಕಿನ ಪ್ರಮುಖ ಜಲಮೂಲಗಳಲ್ಲಿ ಒಂದಾದ ಹನಗೋಡು ಅಣೆಕಟ್ಟೆ ಅಪಾಯದ ಗಂಟೆ ಬಾರಿಸುತ್ತಿದೆ. 
ಆದರೆ, ಇದರ ಪರಿವೇ ಇಲ್ಲದ ಜನಪ್ರತಿನಿಧಿ, ಅಧಿಕಾರಿಗಳು ಮೌನ ವಹಿಸಿರುವುದು ರೈತರನ್ನು ಚಿಂತೆಗೀಡುಮಾಡಿದೆ.
ಲಕ್ಷ್ಮಣ ತೀರ್ಥ ನದಿಗೆ ಹನಗೋಡು ಬಳಿ ಸುಮಾರು ೬೦೦ ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಿಸಲಾಗಿತ್ತು. ಹುಣಸೂರು, ಎಚ್.ಡಿ.ಕೋಟೆ ತಾಲೂಕಿನ ೪೦ ಸಾವಿರ ಎಕರೆ ಅಚ್ಚುಕಟ್ಟ್ಟು  ಪ್ರದೇಶಕ್ಕೆ ನೀರುಣಿಸುತ್ತಿದ್ದರೆ, ೪೦ಕ್ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.