ಶುಕ್ರವಾರ, ಸೆಪ್ಟೆಂಬರ್ 9, 2011

ಬಸ್ ನಿಲ್ದಾಣದಲ್ಲಿ ನಾಟಿಯೊಂದು ಬಾಕಿ!

 ರಾಜೇಂದ್ರ ರಾವ್ ಕೃಷ್ಣರಾಜನಗರ
ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭಗೊಂಡ ಪಟ್ಟಣದ ಸರಕಾರಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಇನ್ನೂ ಮುಗಿದಿಲ್ಲ. ಪರಿಣಾಮ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಪ್ರತಿನಿತ್ಯ ಕೊಳಚೆ ನೀರಿನ ಸ್ನಾನ ಮತ್ತು ಬಸ್‌ನ ಟೈರಿನಿಂದ ಸಿಡಿಯುವ ಕಲ್ಲುಗಳ ಹೊಡೆತದಿಂದ ತಪ್ಪಿಸಿಕೊಂಡು ಬಸ್ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ...!
 ೨೦೧೦ ರ ಪ್ರಾರಂಭದಲ್ಲಿ ಬಸ್ ನಿಲ್ದಾಣ ನವೀಕರಣ ಕಾಮಗಾರಿ ಪ್ರಾರಂಭವಾಗಿ ಕುಂಟುತ್ತಾ ಆಮೆ ವೇಗದಲ್ಲಿ  ಸಾಗಿದೆ. ಹೇಗೋ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ, ನೆಲ ಮಾತ್ರ ಹಾಗೆ ಇದೆ. ಹೆಜ್ಜೆ ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿದ್ದು ಇದರ ಪರಿಣಾಮವನ್ನು ಜನತೆ ಎದುರಿಸುವಂತಾಗಿದೆ.

ಶುಕ್ರವಾರ, ಆಗಸ್ಟ್ 19, 2011

ಕೋಟಿ ಕೋಟಿ ಬಂದರೂ ಅರಸರ ಕಲ್ಲಳ್ಳಿ ಅತಂತ್ರ

ಹನಗೋಡು ನಟರಾಜ್ ಹುಣಸೂರು
ನೀರಿಗೆ ಹಾಹಾಕಾರ, ಬತ್ತಿಹೋದ ಕೆರೆಗಳು, ಕಾಂಪೌಂಡ್ ಇಲ್ಲದ ಆಸ್ಪತ್ರೆ, ನಿವೇಶನಕ್ಕೆ ಪರದಾಟ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯ ಆಸ್ಪತ್ರೆ, ಅವ್ಯವಸ್ಥಿತ ಗ್ರಾ.ಪಂ.ಕಚೇರಿ, ಶಿಥಿಲ ವಸತಿಗೃಹ...
ಇದು ರಾಜ್ಯವನ್ನು ಎಂಟು ವರ್ಷ ಆಳಿದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಹುಟ್ಟೂರು ಕಲ್ಲಹಳ್ಳ್ಳಿಯ ಸ್ಥಿತಿ.  ಅರಸರ ಬಗ್ಗೆ ವೇದಿಕೆ ಗಳಲ್ಲಿ ಹೊಗಳುವ ಪ್ರತಿನಿಧಿಗಳಿಗೆ ಕನಿಷ್ಠ ಅವರ ಹುಟ್ಟೂರನ್ನು ಸಂಪೂರ್ಣ ಅಭಿವೃದ್ಧಿಪಡಿಸುವ ಛಾತಿ ಇಲ್ಲದಿರು ವುದು ದೊಡ್ಡ ದುರಂತ.

ಬುಧವಾರ, ಆಗಸ್ಟ್ 3, 2011

ಇನ್ನೆರಡು ದಿನ ಮಾತ್ರ ಬಾಕಿ

ವಿಕ ಸುದ್ದಿಲೋಕ ಮೈಸೂರು
ಎಲ್‌ಪಿಜಿ ಸಂಪರ್ಕ ಪಡೆಯಲು ಪಡಿತರ ಚೀಟಿ ಹಾಗೂ ವಿದ್ಯುತ್ ಮೀಟರ್ ಸಂಖ್ಯೆ ನೀಡಲು ಆಗಸ್ಟ್ ೫ರ ಡೆಡ್‌ಲೈನ್.
ಈಗಾಗಲೇ ೧೦ ದಿನದ ಹಿಂದೆಯೇ ವೆಬ್‌ಸೈಟ್‌ನಲ್ಲಿ ನೀವು ನೀಡಿದ ದಾಖಲೆ ಮಾಹಿತಿಯನ್ನು ಒದಗಿಸಲಾಗಿದೆ. ತಾಲೂಕು ಕಚೇರಿಗಳ ಆಹಾರ ಶಾಖೆಯಲ್ಲೂ ದಾಖಲೆ ಲಭ್ಯ. ಜಿಲ್ಲಾಧಿಕಾರಿ ಕಚೇರಿಯಲ್ಲೂ ಮಾಹಿತಿ ನೀಡಲಾಗುತ್ತಿದೆ. ಇದನ್ನು ಆಧರಿಸಿ ನಿಮ್ಮ ಗ್ಯಾಸ್ ಸಂಪರ್ಕ ಸರಿಪಡಿಸಿಕೊಳ್ಳಲು ಇದು ೨ನೇ ಅವಕಾಶ. ಈಗ ಸರಿಯಾಗದೇ ಇದ್ದರೆ ಗ್ಯಾಸ್ ಸಂಪರ್ಕ ಕಡಿತವಾಗಲಿದೆ.